ಥೌಸಂಡ್ ಲೈಟ್ಸ್ ಭಾರತದ ತಮಿಳುನಾಡು ರಾಜ್ಯದ ಚೆನ್ನೈನಲ್ಲಿರುವ ಒಂದು ಬಹು-ಗುಮ್ಮಟ ಮಸೀದಿ. ಇದು ದೇಶದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ ಮತ್ತು ನಗರದಲ್ಲಿ ಶಿಯಾ ಮುಸ್ಲಿಮರಿಗೆ ಪೂಜ್ಯ ಪೂಜಾ ಸ್ಥಳವಾಗಿದೆ ಮತ್ತು ಆಜ಼ಾದಾರಿಯಾಗಿದೆ. == ಇತಿಹಾಸ == ಈ ಮಸೀದಿಯನ್ನು 1810 ರಲ್ಲಿ ಅರ್ಕಾಟ್ ನವಾಬ್ ಉಮ್ದತ್ ಉಲ್-ಉಮಾರಾ ನಿರ್ಮಿಸಿದರು. ಇದನ್ನು ಮಧ್ಯಕಾಲೀನ ವಾಸ್ತುಕಲೆಯಲ್ಲಿ ನಿರ್ಮಿಸಲಾಗಿದೆ. ಮಸೀದಿಯ ಜಾಗವನ್ನು ಈ ಹಿಂದೆ ಒಂದು ಸಭಾಂಗಣ ಆಕ್ರಮಿಸಿಕೊಂಡಿತ್ತು. ಸಭಾಭವನವನ್ನು ಬೆಳಗಿಸಲು ಸಾವಿರ ಎಣ್ಣೆ ದೀಪಗಳನ್ನು ಬೆಳಗಿಸುವ ಒಂದು ಸಂಪ್ರದಾಯವಿತ್ತು. ಹೀಗೆ ಈ ಸಂಪ್ರದಾಯದಿಂದ ಮಸೀದಿಗೆ ಅದರ ಹೆಸರು ಬಂದಿದೆ. ಚೆನ್ನೈನ ಮುಖ್ಯ ಶಿಯಾ ಕಾಜ಼ಿ ಮಸೀದಿಯಿಂದ ಕಾರ್ಯನಿರ್ವಹಿಸುತ್ತಾರೆ ಮತ್ತು ಅದೇ ಕುಟುಂಬದವರು ಈ ಹುದ್ದೆಯನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == .. . 2009-06-17 ವೇಬ್ಯಾಕ್ ಮೆಷಿನ್ ನಲ್ಲಿ.